• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ಹಳ್ಳಿಯ ಕಂಡಿರದ ಜೀವನ : part 1

suman49

New Member
19
18
4
ಹಳ್ಳಿಯ ಕಂಡಿರದ ಜೀವನ : part 6
ರಾಜಶೇಖರ್: ನನ್ನನ್ನು ಕ್ಷಮಿಸಿಬಿಡಿ ಗುಂಡಪ್ಪನವರೇ. ನನಗೆ ಮಂಜಪ್ಪನಿಗೆ ಎರಡೇ ದಿನದ ಹಿಂದೆ ಮದುವೆಯಾಗಿದೆ ಅನ್ನೋ ವಿಷಯ ಗೊತ್ತೇ ಇರಲಿಲ್ಲ. ಗೊತ್ತಿದ್ದಿದ್ದರೆ ಖಂಡಿತಾ ಅವನನ್ನು ಇಂತಹ ಸಮಯದಲ್ಲಿ ಕೆಲಸಕ್ಕೆ ಕರೆಯುತ್ತಿರಲಿಲ್ಲ. ಮಂಜಪ್ಪನ ಈ ಪರಿಸ್ಥಿತಿಗೆ ನಾನೇ ನೇರ ಕಾರಣ. ನಾನು ಮಂಜಪ್ಪನಿಗೇ ಫೋನ್ ಮಾಡಿ ಬರೋಕೆ ಒತ್ತಾಯ ಮಾಡಿದೆ.
ಗುಂಡಪ್ಪನ ಕಣ್ಣುಗಳಲ್ಲಿ ನೀರು ತುಂಬಿ ಬಂತು. ಪಾಪ, ಸಾವಿತ್ರಿ ಮನೆಯಲ್ಲಿ ಕಣ್ಣೀರು ಹಾಕುತ್ತಿದ್ದಾಳೆ. ಮದುವೆ ಶಾಸ್ತ್ರದ ಅರಿಶಿನ ಕೂಡ ಇನ್ನು ಮೈ ಮೇಲಿಂದ ಹೋಗಿಲ್ಲ ಸಾಹೇಬ್ರೇ. ಎಂದು ಬಿಕ್ಕಳಿಸಿದರು.
ರಾಜಶೇಖರ್ ಅವರು ಅಷ್ಟರಲ್ಲಿ ತನ್ನ ಸೆಕ್ಯುರಿಟಿ ಟೀಮ್‌ಗೆ ಫೋನ್ ಮಾಡಿ ಬರ ಹೇಳಿದ ಹಾಗೆ ಪೊಲೀಸಗು ಫೋನ್ ಮಡಿದ
ನಿಧಾನವಾಗಿ ಮಂಜಪ್ಪನ ಮನೆಯ ಮುಂದೆ ಜನರ ಗುಂಪು ಜಮಾಯಿಸುತ್ತಿತ್ತು.
ನಿಂಗವ್ವನ ಆಪ್ತ ಗೆಳತಿ ಭಾಗ್ಯಮ್ಮ ಕೂಡ ಓಡೋಡಿ ಬಂದಳು.
ಭಾಗ್ಯಮ್ಮ ಸಾವಿತ್ರಿಯ ಬಳಿ ಬಂದು ಅವಳ ತಲೆ ಸವರುತ್ತಾ, ಧೈರ್ಯ ತಂದುಕೋ ತಾಯಿ, ನಿನ್ನ ಮುತ್ತೈದೆ ಭಾಗ್ಯಕ್ಕೆ ಯಾವ ಕುಂದೂ ಬರೋದಿಲ್ಲ ಎಂದು ಸಮಾಧಾನ ಹೇಳತೊಡಗಿದಳು.
ರಾಜಶೇಖರ್ : ಹಲೋ ಇನ್ಸ್‌ಪೆಕ್ಟರ್, ನಾನು ವಿಜಯ ಸಿಮೆಂಟ್ಸ್ನ ಹೆಡ್ ರಾಜಶೇಖರ್ ಮಾತಾಡ್ತಿರೋದು. ನನ್ನ ನಂಬಿಕಸ್ತ ಡ್ರೈವರ್ ಮಂಜಪ್ಪ ನಾಪತ್ತೆಯಾಗಿದ್ದಾನೆ. ಅವನ ಜೀವಕ್ಕೆ ಅಪಾಯ ಇದೆ ಅಂತ ಅನುಮಾನ ಬರ್ತಿದೆ. ದಯವಿಟ್ಟು ಸಹಾಯ ಮಾಡಿ
ರಾಜಶೇಖರ್ ಫೋನ್ ಇಡುತ್ತಿದ್ದಂತೆ ಗುಂಡಪ್ಪ ಅವರ ಕೈ ಹಿಡಿದು ಬೇಡಿಕೊಂಡರು. ಸಾಹೇಬ್ರೇ, ನನ್ನ ಅಳಿಯನಿಗೆ ಏನೂ ತೊಂದರೆ ಆಗಲ್ವಲ್ಲ? ಎಂದು ದೈನೇಸಿದನು
ರಾಜಶೇಖರ್: ಇಲ್ಲ ಗುಂಡಪ್ಪನವರೇ, ಮಂಜಪ್ಪನಿಗೆ ಏನೂ ಆಗಲು ನಾನು ಬಿಡಲ್ಲ. ಪೊಲೀಸರು ನಮಗೆ ಸಹಾಯ ಮಾಡೋಕೆ ಬರ್ತಿದ್ದಾರೆ. ನೀವು ಧೈರ್ಯವಾಗಿರಿ.
ಹೊರಗಡೆ ಸೇರಿದ್ದ ಜನರಲ್ಲಿ ಗುಸುಗುಸು ಶುರುವಾಗಿತ್ತು.
ಲಕ್ಷ್ಮಿ: ಅಲ್ಲಿದ್ದ ಜನರಿಗೆ ಯಾರೂ ಇಲ್ಲದ ಸಲ್ಲದ ಮಾತುಗಳನ್ನ ಆಡಬೇಡಿ. ಮಂಜಪ್ಪ ಹುಲಿ ಇದ್ದಂತೆ, ಅವನು ವಾಪಸ್ ಬಂದೇ ಬರ್ತಾನೆ.
ಭಾಗ್ಯಮ್ಮ, ನೀನು ನಿಂಗವ್ವನ ಹತ್ತಿರ ಇರು, ಅವಳಿಗೆ ಸಮಾಧಾನ ಮಾಡು ಬಿಪಿ ಜಾಸ್ತಿ ಆದ್ರೆ ಕಷ್ಟ
ಅಷ್ಟರಲ್ಲಿ ಪೊಲೀಸ್ ಜೀಪಿನ ಸೈರನ್ ಶಬ್ದ ಕೇಳಿಸಿತು. ಸೈರನ್ ಶಬ್ದ ಸಾವಿತ್ರಿ ಮತ್ತಷ್ಟು ಜೋರಾಗಿ ಅಳೋಕೆ ಶುರು ಮಾಡಿದಳು
ರಾಜಶೇಖರ್ ಅವರು ಇನ್ಸ್‌ಪೆಕ್ಟರ್ ಬರುವುದನ್ನೇ ಕಾಯುತ್ತಾ ನಿಂತಿದ್ದರು ಅವರಿಗೆ ಇದು ಪ್ರತಿಷ್ಠೆಯ ಮತ್ತು ಪ್ರಾಯಶ್ಚಿತ್ತದ ವಿಷಯವಾಗಿತ್ತು.
ಜೀಪಿನಿಂದ ಇಳಿದವರು ಇನ್ಸ್‌ಪೆಕ್ಟರ್ ವಿಶ್ವನಾಥ್. ಕಟ್ಟುನಿಟ್ಟಿನ ಖಡಕ್ ಅಧಿಕಾರಿಯಾದ ಇವರು ರಾಜಶೇಖರ್ ಅವರಿಗೆ ಮೊದಲೇ ಪರಿಚಯವಿದ್ದವರು.
ವಿಶ್ವನಾಥ್ ಅವರು ಮನೆ ಒಳಗೆ ಬಂದರು. ಮನೆಯಲ್ಲಿದ್ದ ಸಾವಿತ್ರಿ ಮತ್ತು ನಿಂಗವ್ವನ ಕಣ್ಣೀರು ನೋಡಿ ಅವರಿಗೆ ಪರಿಸ್ಥಿತಿ ಅರ್ಥವಾಯಿತು. ಅವರ ದೃಷ್ಟಿ ನೇರವಾಗಿ ಸಾವಿತ್ರಿಯ ಮೇಲೆ ಬಿತ್ತು ನವ ಮದುಮಗಳ ಕಳೆ ಅವಳಲ್ಲಿ ಎದ್ದು ಕಾಣುತ್ತಿತ್ತು
ವಿಶ್ವನಾಥ್: ತಂಗಿ, ಮೊದಲು ಸಮಾಧಾನ ಮಾಡಿಕೊ. ಅಳುತ್ತಾ ಕೂತರೆ ಏನು ಪ್ರಯೋಜನವಿಲ್ಲ. ಅಂದ ಹಾಗೆ ನಿನ್ನ ಹೆಸರೇನಮ್ಮಾ
ಲಕ್ಷ್ಮಿ: ಇವಳ ಹೆಸರು ಸಾವಿತ್ರಿ ಅಂತ ಸಾರ್ ಪಿಡಿಒ ಆಫೀಸರ್ ಆಗಿದ್ದಾಳೆ ನಾನು ಲಕ್ಷ್ಮಿ ಅಂತ ಇವಳಿಗೆ ಅತ್ತೆ ಮತ್ತೆ ಇವರು ಗುಂಡಪ್ಪ ಇವರು ಸಾವಿತ್ರಿ ಅಪ್ಪ ಅವರು ನಿಂಗವ್ವ ಮಂಜಪ್ಪನ ತಾಯಿ
ವಿಶ್ವನಾಥ್: ಸರಿ ಲಕ್ಷ್ಮಿ ಮಂಜಪ್ಪ ಏನಾಗಬೇಕು ಸಾವಿತ್ರಿಗೆ
ಲಕ್ಷ್ಮಿ: ಗಂಡ ಸಾರ್ ಮದುವೆಯಾಗಿ ಇನ್ನು ಎರಡೇ ದಿನ ಆಗಿರೋದು ಅಷ್ಟ್ರಲ್ಲಿ ಇಷ್ಟೆಲ್ಲಾ ಅನಾಹುತ ಆಗೋಯ್ತು .
ಲಕ್ಷ್ಮಿ ಯಾಉತ್ತರ ಕೇಳಿ ವಿಶ್ವನಾಥ್ ಒಂದು ಕ್ಷಣ ಸ್ತಬ್ದರಾದರು.
ವಿಶ್ವನಾಥ್: ಮದುವೆಯಾಗಿ ಎರಡೇ ದಿನವಾಗಿದೆ ಅಂತೀರಾ ಮಂಜಪ್ಪನನ್ನತಡಿಯೋದು ತಾನೇ
ವಿಶ್ವನಾಥ್ ಮಾತು ಕೇಳಿ ಸಾವಿತ್ರಿ ಮ ತ್ತಷ್ಟು ಜೋರಾಗಿ ಅಳೋಕೆ ಶುರು ಮಾಡಿದಳು
ಲಕ್ಷ್ಮಿ: ಇದೆಲ್ಲ ರಾಜಶೇಖರ್ ಸಾಹೇಬರು ಮಾಡಿದ ಯಡವಟ್ಟು ಸಾರ್ ಮಂಜಪ್ಪನೇ ಬರಲೇ ಬೇಕು ಅಂತ ಒತ್ತಾಯ ಮಾಡಿದ್ರು. ಸಾಹೇಬರ ಮಾತನ್ನ ಮಂಜಪ್ಪ ಯಾವಾಗಲೂ ಮೀರ್ತಿರಲಿಲ್ಲ. ಅವರು ಅಷ್ಟು ಹಠ ಹಿಡಿದ ಮೇಲೆ ಮಂಜ ಹೋದ ಸಾರ್
ಲಕ್ಷ್ಮಿಯ ಮಾತು ಕೇಳುತ್ತಿದ್ದಂತೆ ವಿಶ್ವನಾಥ್ ಅವರ ದೃಷ್ಟಿ ಕೋಪದಿಂದ ರಾಜಶೇಖರ್ ಅವರ ಕಡೆಗೆ ತಿರುಗಿತು. ಅವರು ಸೀದಾ ರಾಜಶೇಖರ್ ಹತ್ತಿರ ಹೋದರು
ವಿಶ್ವನಾಥ್: ರಾಜಶೇಖರ್ ಅವರೇ, ಇದೇನಾ ನಿಮ್ಮ ಮನುಷ್ಯತ್ವ? ಮದುವೆಯಾಗಿ ಎರಡೇ ದಿನ ಆದ ಸುಖ ಸಂಸಾರವನ್ನ ಈಥರ ಗೋಳುಕೊಟ್ಟಿರಲ್ಲ ಎಷ್ಟು ಸರಿ? ನಿಮ್ಮ ಸಿಮೆಂಟ್ ಲೋಡ್ ಒಬ್ಬನ ಜೀವನಕ್ಕಿಂತ ಹೆಚ್ಚಾಯಿತೇ? ನಿಮ್ಮ ಈ ಬೇಜವಾಬ್ದಾರಿತನದಿಂದಲೇ ಇವತ್ತು ಈ ಪರಿಸ್ಥಿತಿ ಬಂದಿದೆ!
ರಾಜಶೇಖರ್: ಇಲ್ಲ ಇನ್ಸ್‌ಪೆಕ್ಟರ್ ಮಂಜಪ್ಪನಿಗೆ ಮದುವೆಯಾದ ವಿಷಯ ನನಗೆ ಗೊತ್ತೇ ಇರಲಿಲ್ಲ ಕೆಲಸದ ಒತ್ತಡ ಮತ್ತು ಲೋಡ್ ಅರ್ಜೆಂಟ್ ಇದ್ದಿದ್ದರಿಂದ ನಾನು ಸರಿಯಾಗಿ ಗಮನ ಕೊಡಲಿಲ್ಲ.
ಅವನಿಗೆ ಎರಡೇ ದಿನದ ಹಿಂದೆ ಮದುವೆಯಾಗಿದೆ ಎಂದು ನನಗೆ ತಿಳಿದಿದ್ದರೆ, ನಾನೇ ಖುದ್ದಾಗಿ ಅವನಿಗೆ ಒಂದು ತಿಂಗಳು ರಜೆ ಕೊಟ್ಟು ಸಂಭ್ರಮಿಸಲು ಹೇಳುತ್ತಿದ್ದೆ. ನಾನೇನೂ ಅಷ್ಟು ಕ್ರೂರಿಯಲ್ಲ.
ವಿಶ್ವನಾಥ್: ಗೊತ್ತಿರಲಿಲ್ಲ ಎಂದು ನಿಮ್ಮನ್ನು ನೀವು ಸಮರ್ಥನೆ ಮಾಡ್ಕೋಬೇಡಿ ರಾಜಶೇಖರ್ ಅವರೇ.
ನಿಮ್ಮ ಒಂದು ಫೋನ್ ಕರೆ ಈವತ್ತು ಪರಿಸ್ಥಿತಿ ಎಲ್ಲಿ ಬಂದಿದೆ ನೋಡಿ
ವಿಶ್ವನಾಥ್ ಅವರು ಕೂಡಲೇ ತಮ್ಮ ವೈರ್‌ಲೆಸ್ ವಾಕಿ ಟಾಕಿ ಆನ್ ಮಾಡಿ ಸ್ಟೇಷನ್‌ಗೆ ಸಂದೇಶ ರವಾನಿಸಿದರು.
ಸಾವಿತ್ರಿ ಮಾತ್ರ ಮಂಜಪ್ಪನ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದಳು.
ಭಾಗ್ಯಮ್ಮ: ಅಯ್ಯೋ ನಿಂಗವ್ವ! ಏನಾಯ್ತವ್ವ ನಿನಗೆ? ಸಾವಿತ್ರಿ ನೋಡಮ್ಮ ನಿನ್ನ ಅತ್ತೆ ಕಣ್ಣೇ ಬಿಡ್ತಾ ಇಲ್ಲ
ಬೆಳಿಗ್ಗೆಯಿಂದ ಮಗನ ಆತಂಕದಲ್ಲಿ ಹನಿ ನೀರು ಕುಡಿಯದೆ, ತುತ್ತು ಅನ್ನ ಉಣ್ಣದೆ ಇದ್ದುದರಿಂದ ನಿಂಗವ್ವನ ದೇಹ ಪೂರ್ತಿ ಪೇಲವ ವಾಗಿತ್ತು
ಮೊದಲೇ ಬಿಪಿ ಇದ್ದುದರಿಂದ ಅತಿಯಾದ ಮಾನಸಿಕ ಆತಂಕದಿಂದಾಗಿ ಆಕೆಯ ಬಿಪಿ ಏರುಪೇರಾಗಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಳು.
ಸಾವಿತ್ರಿ: ಅತ್ತೆ.ಅತ್ತೆ ಕಣ್ಣು ಬಿಡಿ! ಏನಾಯ್ತು ನಿಮಗೆ? ಅಯ್ಯೋ ದೇವರೇ, ಒಬ್ಬರಾದ ಮೇಲೆ ಒಬ್ಬರಿಗೆ ಹೀಗಾದರೆ ನಾನೇನು ಮಾಡಲಿ? ಎಂದು ದಿಕ್ಕುತೋಚದೆ ಅತ್ತಳು .
ಭಾಗ್ಯಮ್ಮ: ಲಕ್ಷ್ಮಿ, ಬೇಗ ನೀರು ತನ್ನಿ! ನಿಂಗವ್ವನಿಗೆ ಬಿಪಿ ಇಳಿದ್ ಹಾಗಿದೆ. ನಿನ್ನೆಯಿಂದ ಮಗನ ಜಪ ಮಾಡ್ತಾ ಒಂದು ಹನಿ ನೀರು ಕುಡಿದಿಲ್ಲ ಈ ಪುಣ್ಯಾತಗಿತ್ತಿ
ಲಕ್ಷ್ಮಿ ಓಡಿ ಹೋಗಿ ನೀರು ತಂದು ನಿಂಗವ್ವನ ಮುಖಕ್ಕೆ ಚಿಮುಕಿಸಿದಳು. ಗುಂಡಪ್ಪ ತನ್ನ ತಂಗಿಯ ಕೈಗಳನ್ನು ಉಜ್ಜುತ್ತಾ, ನಿಂಗವ್ವ, ಕಣ್ಣು ಬಿಡವ್ವನಿನ್ನ ಮಗ ಬಂದೇ ಬರ್ತಾನೆ, ನೀನು ಹೀಗೆ ಧೈರ್ಯ ಗೆಡಬೇಡ,ಎಂದು ಬಿಕ್ಕಳಿಸಿದರು.
ರಾಜಶೇಖರ್: ಗುಂಡಪ್ಪ ಅವರೇ, ಇವರ ಸ್ಥಿತಿ ಸರಿಯಿಲ್ಲ. ತಕ್ಷಣ ಆಸ್ಪತ್ರೆಗೆ ಸೇರಿಸಬೇಕು. ನನ್ನ ಕಾರಿನಲ್ಲೇ ಕರೆದುಕೊಂಡು ಹೋಗೋಣ ಬನ್ನಿ.
ರಾಜಶೇಖರ್ ಮತ್ತು ಗುಂಡಪ್ಪ ಸೇರಿ ನಿಂಗವ್ವನನ್ನು ಎತ್ತಿ ಹೊರಗೆ ನಿಂತಿದ್ದ ಕಪ್ಪು ಎಸ್‌ಯುವಿ ಕಾರಿನ ಹಿಂಬದಿಯ ಸೀಟಿನಲ್ಲಿ ಮಲಗಿಸಿದರು. ಲಕ್ಷ್ಮಿ ಮತ್ತು ಭಾಗ್ಯಮ್ಮ ಕೂಡ ಜೊತೆಗೆ ಹೋದರು
ವಿಶ್ವನಾಥ್: ನಾನು ಮಂಜಪ್ಪನ ಫೋನ್ ಲೊಕೇಶನ್ ಟ್ರ್ಯಾಕ್ ಮಾಡ್ತೀನಿ ಏನಾದರೂ ಮಾಹಿತಿ ಸಿಕ್ಕ ತಕ್ಷಣ ನಿಮಗೆ ಫೋನ್ ಮಾಡ್ತೀನಿ. ಅಂತ ಸಾವಿತ್ರಿಗೆ ಹೇಳಿ ಜೀಪ್ ಹತ್ತಿ ಹೋದರು
ಸಾವಿತ್ರಿ ಕಣ್ಣೀರು ಹಾಕುತ್ತಾ ಒಂದು ಕಡೆ ನಾಪತ್ತೆಯಾದ ಗಂಡ, ಇನ್ನೊಂದು ಕಡೆ ಪ್ರಜ್ಞೆ ತಪ್ಪಿದ ಅತ್ತೆ. ಅವಳಿಗೆ ಏನು ಮಾಡಬೇಕೆಂದು ತಿಳಿಯದೆ ತಂದೆಯ ಕೈ ಹಿಡಿದು ಕಾರಿನ ಒಳಗೆ ಅತ್ತೆ ಯಾ ಜೊತೆ
ಕುಂತಳು ಕಾರು ಆಸ್ಪತ್ರೆಯ ಕಡೆಗೆ ವೇಗವಾಗಿ ಹೊರಟಿತು. ಮಂಜಪ್ಪನ ಮನೆಯಲ್ಲಿ ಜನ ನೆರೆದಿದ್ದರು
ಇನ್ಸ್‌ಪೆಕ್ಟರ್ ವಿಶ್ವನಾಥ್ ಅವರ ತಂಡ ಮಂಜಪ್ಪನ ಫೋನ್ ಟ್ರ್ಯಾಕ್ ಮಾಡುವಲ್ಲಿ ಯಶಸ್ವಿಯಾಯಿತು.
ದಟ್ಟವಾದ ಅರಣ್ಯ ಪ್ರದೇಶದ ವಂದು ಮೂಲೆಯಲ್ಲಿ ಮಂಜಪ್ಪನ ಲಾರಿ ಪತ್ತೆಯಾಯಿತು.
ವಿಶ್ವನಾಥ್ ಅವರು ತಮ್ಮ ತಂಡದೊಂದಿಗೆ ತಕ್ಷಣ ಆ ಸ್ಥಳಕ್ಕೆ ಧಾವಿಸಿದರು. ಅಲ್ಲಿ ಕಂಡ ದೃಶ್ಯ ಅವರ ಎದೆ ನಡುಗಿಸುವಂತಿತ್ತು.
ಮಂಜಪ್ಪನ ಲಾರಿಯ ಮುಂಭಾಗದ ಗ್ಲಾಸ್ ಪೂರ್ತಿಯಾಗಿ ಪುಡಿಯಾಗಿತ್ತು.
ಡ್ರೈವರ್ ಸೀಟಿನ ಮೇಲೆ ಮತ್ತು ಸ್ಟೇರಿಂಗ್ ಮೇಲೆ ರಕ್ತದ ಕಲೆಗಳು ಎದ್ದು ಕಾಣುತ್ತಿದ್ದವು.
ಲಾರಿಯ ಪಕ್ಕದಲ್ಲೇ ಒಂದು ಕಾರಿನ ಟೈರ್ ಗುರುತುಗಳು ಸ್ಪಷ್ಟವಾಗಿ ಮೂಡಿದ್ದವು.
ಯಾರೋ ಕಾರಿನಲ್ಲಿ ಬಂದು ಮಂಜಪ್ಪನ ಲಾರಿಯನ್ನು ಅಡ್ಡಗಟ್ಟಿ, ಅವನ ಮೇಲೆ ಹಲ್ಲೆ ಮಾಡಿ ಅಪಹರಿಸಿದ್ದಾರೆ ಎಂಬುದು ಖಚಿತವಾಯಿತು.
ಲಾರಿಯ ಒಳಗೆ ಅಥವಾ ಸುತ್ತಮುತ್ತ ಮಂಜಪ್ಪನ ಸುಳಿವೇ ಇರಲಿಲ್ಲ.
ವಿಶ್ವನಾಥ್ ಅವರು ಅಲ್ಲಿನ ಪರಿಸ್ಥಿತಿಯನ್ನು ಕಂಡು ಕೂಡಲೇ ರಾಜಶೇಖರ್ ಅವರಿಗೆ ಫೋನ್ ಮಾಡಿದರು.
ವಿಶ್ವನಾಥ್: ರಾಜಶೇಖರ್ ಅವರೇ, ಮಂಜಪ್ಪನ ಲಾರಿ ಸಿಕ್ಕಿದೆ. ಆದರೆ ವಿಷಯ ಅಂದುಕೊಂಡಷ್ಟು ಸರಳವಾಗಿಲ್ಲ.
ರಾಜಶೇಖರ್: ಹೇಳಿ ಸರ್ ಏನಾಯಿತು
ವಿಶ್ವನಾಥ್: ಲಾರಿ ಕಾಡಿನ ಮಧ್ಯೆ ಇದೆ, ಲಾರಿ ಯಾ ಗ್ಲಾಸ್ ಪೂರ್ತಿ ಒಡೆದು ಹೋಗಿದೆ. ಸೀಟಿನ ಮೇಲೆ ತುಂಬಾ ರಕ್ತದ ಕಲೆಗಳಿವೆ ಮಂಜಪ್ಪ ಲೋರಿ ಯಲ್ಲಿ ಇಲ್ಲ
ರಾಜಶೇಖರ್ ಒಂದು ಕ್ಷಣ ಹೌಹಾರಿ ಹೋದರು.
ರಾಜಶೇಖರ್: ಏನು ಹೇಳ್ತಿದ್ದೀರಾ ಇನ್ಸ್‌ಪೆಕ್ಟರ್?
ವಿಶ್ವನಾಥ್: ಈಗಲೇ ಏನೂ ಹೇಳಕ್ಕಾಗಲ್ಲ.
ಆದರೆ ಒಂದು ಮುಖ್ಯವಾದ ಮಾತುಈ ವಿಷಯವನ್ನು ಈಗಲೇ ಸಾವಿತ್ರಿಗಾಗಲಿ ಅಥವಾ ನಿಂಗವ್ವನಿಗಾಗಲಿ ಹೇಳಬೇಡಿ. ರಕ್ತದ ವಿಷಯ ಗೊತ್ತಾದರೆ ಅವರು ಆಘಾತ ತಡೆದುಕೊಳ್ಳಲಾರರು.
ರಾಜಶೇಖರ್ ಫೋನ್ ಇಟ್ಟು ಕಂಗಾಲಾಗಿ ನಿಂತರು. ಆಸ್ಪತ್ರೆಯ ಒಳಗಡೆ ನಿಂಗವ್ವನಿಗೆ ಚಿಕಿತ್ಸೆ ನಡೆಯುತ್ತಿತ್ತು, ಹೊರಗೆ ಸಾವಿತ್ರಿ ಕಣ್ಣೀರು ಹಾಕುತ್ತಾ ಅತ್ತೆಯ ಏಳಿಗೆಗಾಗಿ ಮತ್ತು ಗಂಡನ ಬರುವಿಕೆಗಾಗಿ ಕಾಯುತ್ತಿದ್ದಳು.
ಸಾವಿತ್ರಿ ಮೆಲ್ಲನೆ ರಾಜಶೇಖರ್ ಹತ್ತಿರ ಬಂದು, ಸರ್, ಮಂಜಪ್ಪನ ಬಗ್ಗೆ ಏನಾದರೂ ಸುಳಿವು ಸಿಕ್ತಾ? ಎಂದು ಕೇಳಿದಾಗ ರಾಜಶೇಖರ್ ಅವಳ ಕಣ್ಣುಗಳನ್ನು ನೋಡಲಾಗದೆ ಮುಖ ತಿರುಗಿಸಿಕೊಂಡರು.
ಮಧ್ಯಾಹ್ನ ಆಗುತ್ತಾ ಬಂತು. ನಿಂಗವ್ವ ನಿಧಾನವಾಗಿ ಕಣ್ಣು ಬಿಡುತ್ತಿದ್ದಳು
ಮನೆಯಲ್ಲಿ ದೇವರ ಫೋಟೋದ ಮುಂದೆ ದೀಪ ಹಚ್ಚಿ ಪ್ರಾರ್ಥಿಸುತ್ತಿದ್ದ ಭಾಗ್ಯಮ್ಮನಿಗೆ ಸಾವಿತ್ರಿಯ ಫೋನ್ ರಿಂಗಣಿಸುವದು ಕೇಳಿಸಿತು ಫೋನ್ ಸ್ಕ್ರೀನ್ ವಡೆದಿದ್ದ ಕರಣ ಮೇಲೆ ಹೆಸರು ಸರಿಯಾಗಿ ಕಾಣಿಸಲಿಲ್ಲ
ಭಾಗ್ಯಮ್ಮ ಫೋನ್ ರಿಸೀವ್ ಮಾಡಿದಳು
ಭಾಗ್ಯಮ್ಮ : ಹಲೋ ಯಾರು
ಸೋಮಶೇಖರ್ : ಹಲೋ ಸಾವಿತ್ರಿ ಅವರೇ, ನಾನು ತಾಲೂಕು ಪಂಚಾಯಿತಿಯಿಂದ ಇಒ
ಮಾತನಾಡುತ್ತಿರುವುದು. ಇವತ್ತು ಜಿಲ್ಲಾ ಪಂಚಾಯಿತಿಯಲ್ಲಿ ಬಹಳ ಮುಖ್ಯವಾದ ಮೀಟಿಂಗ್ ಇದೆ ಅಂತ ನಿಮಗೆ ಮೊದಲೇ ತಿಳಿಸಲಾಗಿತ್ತು. ಇಷ್ಟೊತ್ತಾದರೂ ನೀವು ಕಚೇರಿಗೆ ಬಂದಿಲ್ಲ, ಫೋನ್ ಮಾಡಿದರೆ ಈಗ ತೆಗಿತಾ ಇದ್ದೀರಾ. ಏನಾಗಿದೆ? ಫೋನ್ ಮಾಡಿ ಮಾಡಿ ಸಾಕಾಯಿತು
ಭಾಗ್ಯಮ್ಮ: ಸಾರ್ ನಾನು ಸಾವಿತ್ರಿ ಅಲ್ಲ ಅವಳ ಪಕ್ಕದ ಮನೆಯವಳು ಭಾಗ್ಯಮ್ಮ ಅಂತ.
ಸೋಮಶೇಖರ್ : ಅಮ್ಮಾ, ಸಾವಿತ್ರಿ ಎಲ್ಲಿದ್ದಾಳೆ? ಇದು ಇಂಪಾರ್ಟೆಂಟ್ ಮೀಟಿಂಗ್. ಸಿಇಒ (CEO) ಸಾಹೇಬ್ರು ಅವಳಿಗಾಗಿ ಕಾಯ್ತಿದ್ದಾರೆ. ಯನಿಗಿದೆ ಸವಿತ್ರ್ರಿ ಮೇಡಂಗೆ ?
ಭಾಗ್ಯಮ್ಮ: ಅಳುತ್ತಾ ಸಾರ್, ಸಾವಿತ್ರಿ ಆಸ್ಪತ್ರೆಯಲ್ಲಿದ್ದಾಳೆ ಸಾರ್. ಮದುವೆಯಾಗಿ ಎರಡೇ ದಿನಕ್ಕೆ ಅವಳ ಗಂಡ ಮಂಜಪ್ಪ ನಾಪತ್ತೆಯಾಗಿದ್ದಾನೆ ಇಲ್ಲಿ ಅತ್ತೆ ಪ್ರಜ್ಞೆ ತಪ್ಪಿ ಆಸ್ಪತ್ರೆ ಸೇರಿದ್ದಾರೆ, ಸಾವಿತ್ರಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾಳೆ. ಅವಳು ಈಗ ಮಾತನಾಡೋ ಸ್ಥಿತಿಯಲ್ಲೂ ಇಲ್ಲ ಸಾರ್ d ಯವಿಟ್ಟು ಅವಳಿಗೆ ಸ್ವಲ್ಪ ದಿನ ರಾಜ ಕೊಡಿ
ಭಾಗ್ಯಮ್ಮನ ಮಾತು ಕೇಳಿ ಇಒ ಸೋಮಶೇಖರ್ ಅವರು ಒಂದು ಕ್ಷಣ ಸ್ತಬ್ದರಾದರು.
ಅತ್ಯಂತ ಶಿಸ್ತಿನಿಂದ ಕೆಲಸ ಮಾಡುತ್ತಿದ್ದ, ಚುರುಕಾದ ಅಧಿಕಾರಿ ಸಾವಿತ್ರಿಗೆ ಇಂತಹ ಘೋರ ಸಂಕಷ್ಟ ಎದುರಾಗಿದೆ ಎಂದು ಕೇಳಿ ಅವರ ಧ್ವನಿ ಸಿಟ್ಟಿನಿಂದ ಈಗ ಸಹಾನುಭೂತಿಯಾಗಿ ಬದಲಾ ಯಿತು.
ಸೋಮಶೇಖರ್: ಅಯ್ಯೋ ದೇವರೇ! ಈ ವಿಷಯ ನನಗೆ ಗೊತ್ತೇ ಇರಲಿಲ್ಲಮ್ಮ.
ನೀವು ಸಾವಿತ್ರಿಗೆ ಧೈರ್ಯ ಹೇಳಿ. ಕೆಲಸದ ಬಗ್ಗೆ ಅವಳು ಈಗ ಸ್ವಲ್ಪವೂ ತಲೆ ಕೆಡಿಸಿಕೊಳ್ಳುವುದು ಬೇಡ. ನಾನು ಜಿಲ್ಲಾ ಪಂಚಾಯಿತಿಯಲ್ಲಿ ಮಾತನಾಡಿ ಮೀಟಿಂಗ್ ಮ್ಯಾನೇಜ್ ಮಾಡುತ್ತೇನೆ. ಅವಳಿಗೆ ಎಷ್ಟು ದಿನ ಬೇಕೋ ಅಷ್ಟು ದಿನ ರಜೆ ಮಂಜೂರು ಮಾಡೋಣ.
ಭಾಗ್ಯಮ್ಮ ಫೋನ್ ಇಟ್ಟು ದೇವರ ಮುಂದೆ ಕೈಮುಗಿದಳು.
ಅತ್ತ ಆಸ್ಪತ್ರೆಯಲ್ಲಿ ಮಧ್ಯಾಹ್ನ 2 ಗಂಟೆ ಆಗುತ್ತಾ ಬಂಡಿತು
. ಚಿಕಿತ್ಸೆ ಫಲಕಾರಿಯಾಗಿ ನಿಂಗವ್ವ ನಿಧಾನವಾಗಿ ಕಣ್ಣು ಬಿಟ್ಟಳು. ಎದುರಿಗೇ ಕಣ್ಣೀರು ಹಾಕುತ್ತಾ ಕುಳಿತಿದ್ದ ಸಾವಿತ್ರಿಯನ್ನು ಕಂಡು ಮರುಗಿದಳು
ನಿಂಗವ್ವ: ಸಾವಿತ್ರಿ ನನ್ನ ಮಂಜ ಇನ್ನು ಬಂದಿಲ್ವ ?
ಸಾವಿತ್ರಿ ಅತ್ತೆಯ ಕೈ ಹಿಡಿದು ಬಿಕ್ಕಳಿಸುತ್ತಾ ಅಳತೊಡಗಿದಳು
ರಾಜಶೇಖರ್ ಮನಸ್ಸು ಮರುಗುಟ್ಟಿತು . ಮಂಜಪ್ಪನಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಆ ಜವಾಬ್ದಾರಿಯನ್ನು ತಾನು ಹೇಗೆ ಹೊರಲಿ? ಇಬ್ಬರು ಹೆಣ್ಣುಮಕ್ಕಳಿಗೆ ನಿಜವನ್ನು ಹೇಳುವ ಧೈರ್ಯವಂತೂ ಅವರಲ್ಲಿರಲಿಲ್ಲ. ಅವರು ಹೊರಗೆ ಬಂದು ಇನ್ಸ್‌ಪೆಕ್ಟರ್ ವಿಶ್ವನಾಥ್ ಅವರಿಗೆ ಮತ್ತೊಮ್ಮೆ ಫೋನ್ ಮಾಡಿದರು.
ರಾಜಶೇಖರ್: ಹಲೋ ವಿಶ್ವನಾಥ್ ಅವರೇ, ಈಗ ಏನಾದರೂ ಹೆಚ್ಚಿನ ಲೀಡ್ ಸಿಕ್ಕಿದೆಯೇ? ಇಲ್ಲಿ ನಿಂಗವ್ವ ಪ್ರಜ್ಞೆ ಬಂದ ಮೇಲೆ ಮಗನ ಬಗ್ಗೆಯೇ ಕೇಳ್ತಿದ್ದಾರೆ.
ವಿಶ್ವನಾಥ್: ಇನ್ನೂ ಇಲ್ಲ ರಾಜಶೇಖರ್ ಅವರೇ.ನಾವು ಟೀಮ್ ಕರೆಸಿದ್ದೇವೆ. ಕಾಡಿನ ಹಾದಿಯಲ್ಲಿ ಆ ಕಾರಿನ ಟೈರ್ ಗುರುತುಗಳನ್ನು ಹಿಂಬಾಲಿಸುತ್ತಿದ್ದೇವೆ. ನೀವು ಸ್ವಲ್ಪ ತಾಳ್ಮೆಯಿಂದಿರಿ. ನಾನು ಮಂಜಪ್ಪನನ್ನು ಹುಡುಕದೆ ಬಿಡಲ್ಲ.
ಸಾವಿತ್ರಿ ಮೆಲ್ಲನೆ ಕಾರಿಡಾರ್‌ನಿಂದ ನಡೆದುಕೊಂಡು ರಾಜಶೇಖರ್ ಅವರ ಹತ್ತಿರ ಬಂದಳು. ಅವಳ ಬಾಡಿದ ಮುಖ ಕಂಡು ರಾಜಶೇಖರ್ ಅವರು ಫೋನ್ ಕಟ್ ಮಾಡಿದರು.
ಸಾವಿತ್ರಿ: ಪೊಲೀಸ್ನವರು ಏನಾದ್ರು ಹೇಳಿದ್ರ
ಮತ್ತೂಮ್ಮೆ ರಾಜಶೇಖರ್ ಅವಳ ಕಣ್ಣುಗಳನ್ನು ನೋಡಲಾಗದೆ ಮುಖ ತಿರುಗಿಸಿಕೊಂಡರು
ರಾಜಶೇಖರ್: ಸಾವಿತ್ರಿ, ನೀನು ಪಿಡಿಒ ಅಧಿಕಾರಿ. ಧೈರ್ಯವಾಗಿರಬೇಕು. ಮಂಜಪ್ಪನಿಗೆ ಏನೂ ಆಗಲ್ಲ, ನಾನು ಅವನನ್ನು ಮರಳಿ ಕರೆತರುತ್ತೇನೆ ಎಂದರು
ಇತ್ತ ಇನ್ಸ್‌ಪೆಕ್ಟರ್ ವಿಶ್ವನಾಥ್ ಅವರು ಲಾರಿಯಿದ್ದ ಜಾಗದಿಂದ ಸುಮಾರು ಐದು ಕಿಲೋಮೀಟರ್ ದೂರದವರೆಗೂ ಕಾರಿನ ಟೈರ್ ಗುರುತುಗಳನ್ನು ಹಿಂಬಾಲಿಸಿಕೊಂಡು ಹೋಗಿದ್ದರು.
ವಿಶ್ವನಾಥ್: ತನ್ನ ಕಾನ್ಸ್ಟೇಬಲ್‌ಗೆ ನೋಡು, ಮಂಜಪ್ಪನ ಮೇಲೆ ಹಲ್ಲೆ ನಡೆದಿರೋದು ಗ್ಯಾರಂಟಿ. ಆದರೆ ರಕ್ತದ ಪ್ರಮಾಣ ನೋಡಿದರೆ ಅವನು ಬದುಕಿರೋ ಸಾಧ್ಯತೆ ಕಡಿಮೆ ಅನಿಸ್ತಾ ಇದೆ .
ಪೊಲೀಸರು ಹುಡುಕುತ್ತ ಪಾಲು ಮನೆಗೆ ಬಂದರು ಅಲ್ಲಿ ವಂದು ಡೈರಿ ಸಿಕ್ಕಿತು ಅದರಲ್ಲಿ ಮಂಜಪ್ಪ ಅಂತ ಬರೆದಿತ್ತು ಪುಟ ತಿರುವಿ ನೋಡಿದರೆ ಬರಿ ಫೋನ್ ನಂಬರ್ಸ್ ಇದ್ದವು.
ವಿಶ್ವನಾಥ್: ಆದ್ರೆ ಡೈರಿ ಲೋರಿ ಬಿಟ್ಟು ಇಷ್ಟು ದೂರ ಹೇಗೆ ಬಿಟ್ಟು ಅಂತ ಗೊತ್ತಾಗುತ್ತಿಲ್ಲ
ಮನೆಯ ಒಳಗಡೆ ಟಾರ್ಚ್ ಬಿಟ್ಟು ನೋಡಿದರು. ಅಲ್ಲಿ ಬಿದ್ದಿದ್ದ ಕೆಲವು ಖಾಲಿ ಬಾಟಲಿಗಳು ಮತ್ತು ಈಗ್ತಾನೇ ಸುತ್ತ ಸಿಗರೇಟ್ ಸಿಕ್ಕಿತ್ತು
ವಿಶ್ವನಾಥ್: ಈ ಪಾಲು ಬಿದ್ದ ಮನೆಗೆ ಯಾರು ಬಂದು ಹೋಗಿದ್ದಾರೆ ಎಂದು ತನ್ನ ಕಾನ್ಸ್ಟೇಬಲ್ಗೆ ಹೇಳಿದರು
ಸುತ್ತ ಮುತ್ತ ಅಲರ್ಟ್ ಮಾಡೋಕೆ ಹೇಳು ಸುರೇಶ ಅಂತ ತಮ್ಮ ನಿಷ್ಟಾವಂತ ಸಿಬಂದಿಗೆ ಹೇಳಿದರು
 

grsree

New Member
99
37
18
ಬಹಳ ದಿನಗಳ ನಂತರ ಹೀಗೊಂದು ಒಳ್ಳೆಯ ಕತೆ ಉತ್ತಮ ಶೈಲಿಯಲ್ಲಿ ಬರೆಯುವರು ಬಂದಿದ್ದಾರೆ. ನಿಮಗೆ ವಂದನೆಗಳು. ಸೊಗಸಾದ ನಿರೂಪಣೆ. ಒಳ್ಳೆಯ ವರ್ಣನೆ. ಹಿಡಿತದಲ್ಲಿ ಇರುವ ಬರವಣಿಗೆ.ಮುಂದುವರಿಸಿ. ಮುಂದಿನ ಸಂಚಿಕೆಗಾಗಿ ಕಾಯುತ್ತಾ ಇರುವ ಓದುಗರು.
 
Top